‘ನಿಂಬೆ ಹುಳಿ’ ಹೀರಲು ರೆಡಿ

  • IndiaGlitz, [Monday,November 18 2013]

ನಿಂಬೆ ಹುಳಿ ತುಂಬಾ ಸಿಹಿ ನಿಂಬೆ ಹುಳಿ ತುಂಬಾ ಕಹಿ... ನಾ ಚಿಕ್ಕವನಾಗಿದ್ದಾಗ ಅಪ್ಪ ಹೇಳುತ್ತಿದ್ದರು....ಇದು ಹೆಸರಾಂತ ಕವಿ ಬಿ ಆರ್ ಲಕ್ಷ್ಮಣ್ ರಾವ್ ಅವರ ಕವಿತೆ. ಆ ಕವಿತೆಯ ಮೊದಲು ಸಾಲುಗಳು - ನಿಂಬೆ ಹುಳಿ’ಚಿತ್ರಕ್ಕೂ ಸಂಬಂದವಿದೆಯೇ! ಏನೋ ಗೊತ್ತಿಲ್ಲಪ್ಪ ಸಿನೆಮಾ ನೋಡಿ ಹೇಳಬೇಕು.

ಸಧ್ಯಕ್ಕಂತೂ ಈ ಚಿತ್ರದ ಬಗ್ಗೆ ನಿರ್ದೇಶಕ ಹೇಮಂತ್ ಹೆಗ್ಡೆ ಅವರು ಎಲ್ಲ ಕಾಮಿಡಿಗಳ ದೊಡ್ಡಪ್ಪ ಎನ್ನುತ್ತಾ ಇದ್ದಾರೆ. ದೊಡ್ಡಪ್ಪನೊ ಚಿಕ್ಕಪ್ಪನೊ ಪ್ರೇಕ್ಷಕ ನಿರ್ಧರಿಸೋದು. ಆದರೆ ಒಂದಂತು ನಿಜ. ಲಕ್ಷ್ಮಣ್ ಅವರ ಬರೆದ ಸಾಲು ನಿಂಬೆ ಹುಳಿ ಸಿಹಿ ಅಥವಾ ಕಹಿ ಎಂದು ತಿಳಿಯಲಿದೆ. ಅದಕ್ಕೆ ದಿವಸಗಳು ಹತ್ತಿರ ಬರುತ್ತಿದೆ.

ಯು ಟ್ಯೂಬು ಅಲ್ಲಿ ನಿಂಬೆ ಹುಳಿ’ ಹಾಡು ಕೇಳುಗರನ್ನು ಹಾಗೂ ನೋಡುಗರನ್ನು ಗಿಟ್ಟಿಸಿಕೊಂಡಿರುವುದು ಸತ್ಯ. ಮುಕ್ತ ಆರ್ಟ್ಸ್ ಅಡಿಯಲ್ಲಿ ತಯಾರಾಗಿರುವ ಈ ಚಿತ್ರ ಈಗ ಯು/ಎ ಅರ್ಹತ ಪಾತ್ರವನ್ನು ಪಡೆದು ಕೊಂಡಿದೆ.

ಅಭಿನಯದ ನಿರ್ದೇಶನ ಕಥೆ ಚಿತ್ರಕಥೆ, ಸಂಭಾಷಣೆ ಹೇಮಂತ್ ಹೆಗ್ಡೆ ಅವರದು. ಮಧುರಿಮ, ಕೋಮಲ್ ಝ, ನಿವೇಧಿತ ಓಂ ಪ್ರಕಾಷ್ ರಾವು ಬುಲ್ಲೆಟ್ ಪ್ರಕಾಷ್ ರಮೇಶ್ ಭಟ್ ಅವರು ಇದ್ದಾರೆ. ಅನುಪಮ್ ಖೇರ್ ಅವರ ಜಾಗಕ್ಕೆ ರಮೇಶ್ ಭಟ್ ಅವರು ಡಾಕ್ಟರ್ ಪಾತ್ರವನ್ನು ಮಾಡಿದ್ದಾರೆ.

ವೀರ ಸಮರ್ಥ ಅವರ ಸಂಗೀತ ನಿರ್ದೇಶನದ ಚುಟುಕು ಕವಿ ಡುಂಡಿರಾಜ್ ಅವರ ರಾಮ ರಾಮ...ಹಾಡು ಈಗ ಜನಪ್ರಿಯತೆ ಪಟ್ಟಿಯಲ್ಲಿ ಇದೆ.

ಸಂದೀಪ್ ಕುಮಾರ್ ಅವರು ಛಾಯಾಗ್ರಾಹಕರು. ಜಾಲಿ ಬಾಸ್ಟಿನ್ ಅವರ ಸಾಹಸ ಮುರಳಿ, ಚಂದ್ರ ಮಯೂರ್ ಶಂಕರ್ ಅವರ ನೃತ್ಯ ನಿರ್ದೇಶನ ಸೌಂದರ್ ರಾಜ್ ಅವರ ಸಂಕಲನ ಈ ಚಿತ್ರಕ್ಕಿದೆ.